Close

    ಸಂಸ್ಥೆ

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ರಾಜ್ಯ ಶಾಸಕಾಂಗದ ಪ್ರತ್ಯೇಕ ಕಾಯ್ದೆಯಾದ ಬಿಡಿಎ ಕಾಯ್ದೆ 1976ರ ಅಡಿಯಲ್ಲಿ 16ನೇ ಜನವರಿ 1976ರಂದು ಅಸ್ತಿತ್ವಕ್ಕೆ ಬಂದಿದೆ. ಈ ಪ್ರಾಧಿಕಾರವನ್ನು ಹಿಂದಿನ ಸ್ಥಳೀಯ ಯೋಜನಾ ಪ್ರಾಧಿಕಾರದ ನಗರ ಯೋಜನಾ ಕಾರ್ಯಗಳನ್ನು ಹಾಗೂ ನಗರಾಭಿವೃದ್ಧಿ ವಿಶ್ವಸ್ಥ ಮಂಡಳಿ (ಸಿಐಟಿಬಿ)ಯ ಅಭಿವೃದ್ಧಿ ಗುರಿಗಳನ್ನು ಅಡಕಗೊಳಿಸಿ ರಚಿಸಲಾಗಿದೆ.  ಬೆಂಗಳೂರು 1306 ಚದರ ಕಿ.ಮೀ. ವಿಶಾಲ ವ್ಯಾಪ್ತಿಯುಳ್ಳ ವಿಶ್ವದ ಜನರನ್ನು ಆಕರ್ಷಿಸುತ್ತಿರುವ ಒಂದು ಮಹಾನಗರ. ಉದ್ಯಾನನಗರಿಗೆ ವಿಭಿನ್ನ ಸಂಸ್ಕøತಿ, ಜೀವನ ಶೈಲಿಯನ್ನೊಳಗೊಂಡ ಭವ್ಯ ಇತಿಹಾಸವಿದ್ದು, ಆಹ್ಲಾದಕರ ಹವಾಮಾನವಿದೆ. 

     ಹಿಂದೆ ಇದ್ದ ಸಿಟಿ ಇಂಪ್ರುಮೆಂಟ್ ಟ್ರಸ್ಟ್ ಬೋರ್ಡ್ ಇದರ ಸ್ಥಾನಕ್ಕೆ 1976ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಯೋಜನಾ ಬದ್ದವಾಗಿ ಸ್ಥಾಪಿತಗೊಂಡಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಉದ್ದೇಶಗಳು ಗುಣಮಟ್ಟದ ನಗರದ ಯೋಜನೆಗಳು ಅಂದರೆ ಬೆಂಗಳೂರು ನಗರವನ್ನು ಯೋಜನಾ ಬದ್ಧವಾಗಿ ಮೇಲ್ಸುತುವೆ, ರಸ್ತೆಗಳೂ ಮುಂತಾದವುಗಳನ್ನು ಅಭಿವೃದ್ಧಿ ಪಡಿಸುವುದು ಹಾಗೂ ನಾಗರೀಕರಿಗೆ ಇರಲು ಒಂದು ಮನೆಯ ಉದ್ದೇಶಕ್ಕಾಗಿ ನಗರದಲ್ಲಿ ವಿವಿಧ ಬಡಾವಣೆಗಳನ್ನು ರಚಿಸಿ ನಾಗರೀಕರಿಗೆ ಬೆಂಗಳೂರಿನಲ್ಲಿ ನಿವೇಶನಗಳನ್ನು ಹಂಚುವುದು ಹಾಗೂ ಇತರ ಸೇವೆಗಳನ್ನು ಜನರ ಅನುಕೂಲಕ್ಕಾಗಿ ಒದಗಿಸುವುದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ಥಾಪಿತಗೊಂಡ ದಿನದಿಂದ 76,000 ನಿವೇಶನಗಳನ್ನು ನಾಗರೀಕರಿಗೆ ಮನೆಗಳನ್ನು ಹಾಗೂ ಇತರೆ ಉದ್ದೇಶಕ್ಕಾಗಿ ನಿವೇಶನಗಳನ್ನು ಹಂಚಕೆಮಾಡಲಾಗಿದೆ ಮುಂದುವರೆದು 800 ನಾಗರೀಕ ಸೌಲಭ್ಯ ನಿವೇಶನಗಳನ್ನು ವಿವಿಧ ವಾಣಿಜ್ಯ ಉದ್ದೇಶಕ್ಕಾಗಿ ಅಂದರೆ ಸಂಸ್ಥೆಗಳು, ಉದ್ಯಾನವನ ಮುಂತಾದ ಉದ್ದೇಶಕ್ಕಾಗಿ ಬಡಾವಣೆಗೆ ಅವಶ್ಯಕತೆ ಇರುವ ನಿವೇಶನಗಳನ್ನು ಹಂಚಲಾಗಿದೆ. ಬೆಂಗಳೂರು ನಗರದಲ್ಲಿ ಪ್ರತಿಷ್ಠಿತವಾದ ಬಡಾವಣೆಗಳಾದ ಜಯನಗರ, ರಾಜಾಜಿನಗರ, ಇಂದಿರಾನಗರ, ಪ್ಯಾಲೇಸ್ ಅಪ್ಪರ್ ಅರ್ಚರಡ್, ಕೋರ ಮಂಗಲ ಈ ಬಡಾವಣೆಗಳನ್ನು ಸಿ.ಐ.ಟಿ.ಬಿ. ಅಂದರೆ ಈಗಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಯೋಜನಾ ಬದ್ಧವಾಗಿ ಬಡಾವಣೆಗಳನ್ನು ರಚಿಸಿದೆ.

    ಸಿ.ಐ.ಟಿ.ಬಿಯು ಬೆಂಗಳೂರು ನಗರದಲ್ಲಿ ಯೋಜನಾ ಬದ್ಧವಾಗಿ ನಗರದ ವಿವಿಧ ಕಡೆಗಳಲ್ಲಿ ಬಡಾವಣೆಗಳನ್ನು ರಚಿಸಿ ನಾಗರೀಕರು ವಾಸಿಸಲು ವಸತಿಯನ್ನು ಕಲ್ಪಿಸಿ ಕೊಡುವ ಉದ್ದೇಶದಿಂದ ಇದರ ಬೇಡಿಕೆಯನ್ನು ಅರಿತು ಸಂಸ್ಥೆಯು ನಿವೇಶನಗಳ ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದರ ಜೊತೆಯಲ್ಲೆ ಸಿ.ಐ.ಟಿ.ಬಿಯು 

    ಅನೇಕ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಿದೆ ಮುಂದುವರೆದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನಗರದ ರಸ್ತೆಗಳ ಅಗಲೀಕರಣದ ಕಾರ್ಯದಲ್ಲಿಯು ಸಹ ಪ್ರಮುಖ ಪಾತ್ರ ವಹಿಸಿದೆ. ಉದಾಹರಣೆಗೆ ಈಗಿನ ಪ್ರಮುಖ ರಸ್ತೆಯಾದ ಬಿ.ವಿ.ಕೆ ಅಯ್ಯಂಗಾರ್ ರಸ್ತೆ.

    ಸಿ.ಐ.ಟಿ.ಬಿಯು ಅಂದರೆ ಈಗಿನ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಸ್ಥಾಪಿತಗೊಂಡ ದಿನದಿಂದ 68,300 ನಿವೇಶನಗಳನ್ನು ವಸತಿ, ವಾಣಿಜ್ಯ, ಕೈಗಾರಿಕಾ ಹಾಗೂ ಇತರ ಉದ್ದೇಶಗಳಿಗಾಗಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ಈ ಹಂಚಿಕೆಯಲ್ಲಿ ಶೇ.40 ರಷ್ಟು ಆರ್ಥಿಕ ದುರ್ಬಲತೆ ಹೊಂದಿರುವವರಿಗೂ ಸಹ ಹಂಚಿಕೆ ಮಾಡಿ ಸಮಾಜದಲ್ಲಿ ಇವರನ್ನು ಮುಖ್ಯವಾಹಿನಿಗೆ ತರಲು ಶ್ರಮ ವಹಿಸಿದೆ.

    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ದೇಶದ ಬೆಳವಣಿಗೆಯಲ್ಲಿ ಸಾಮಾಜಿಕೆ ನ್ಯಾಯ ಹಾಗೂ ಸಮಾನತೆಯ ದೃಷ್ಟಿಯಿಂದ ಆರ್ಥಿಕ ದುರ್ಬಲತೆ ಹೊಂದಿರುವವರಿಗೆ ಶೇ. 50 ರಷ್ಟು ವಿನಾಯಿತಿಯನ್ನು ಮೌಲ್ಯದಲ್ಲಿ ನೀಡಿ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ.